Saturday, February 20, 2016

ಬಂದಿತೇಕೆ ಮಳೆ?

ಆ ತಿರುವಿನಲ್ಲಿ ನಿಂತು
ನಾ ಕಾದಿದ್ದು..ಅವಳಿಗೆ
ಬಂದಿದ್ದು.. ಮಳೆ!
ಬಹುಶಃ ಬರಲಾರಳು ಅವಳು ಇನ್ನು
ಬಂದಿತೇಕೆ ಮಳೆ?

ಮಳೆಹನಿ

ಮತ್ತೆ ಬಂದೆ ನೀನು ಮರಳಿ ತವರಿಗೆ
ಮುಗಿಲ ಮೋಹ ಕಳೆದು ಭೂತಾಯಿ ಮಡಿಲಿಗೆ
ಹೇಗಿತ್ತು ಪಯಣ, ಮೇಘ ಸವಾರಿ ?
ಮತ್ತೇ ಬೇಕಾಯಿತೇ ತಾಯ ಮಡಿಲು
ಬಂದೆಯಲ್ಲ ಮರಳಿ, ಗಾಳಿಯ ಬೆನ್ನೇರಿ

Friday, February 12, 2016

ಇಳೆ

ಬಂದನೋ ಬಾಲಕೃಷ್ಣ ಬಾಲಲೀಲೆ ತೋರಲು
ಒತ್ತಡದ ಈ ಬದುಕಿಗೆ ಕೊಂಚ ನೆಮ್ಮದಿಯ ನೀಡಲು
ತೊದಲುನುಡಿಯ, ತುಂಟತನದ, ಖುಷಿಯ ಎಲ್ಲೆಡೆ ಹಂಚಲು  
ಅಗಲಿದ ಪ್ರತಿಕ್ಷಣ ನೆನಪಾಗಿ ಕಾಡಲು, ಮುಗುಳುನಗೆಯ ತರಿಸಲು
ಬಂದನೋ ಬಾಲಕೃಷ್ಣ ಈ ಧರೆಗೆ ನಮಗಾಗಿ
ಇಳೆಯಾಗಿ, ನಮ್ಮ ಮಗಳಾಗಿ