Wednesday, April 13, 2016

ಹಳೆಯ ಕರಿಯ ಕಾರು

ಆ ಹಳೆಯ ಕರಿಯ ಕಾರಿನಲ್ಲಿ
ಮರೆಯಲಾಗದ ನೆನಪುಗಳಿವೆ
ನೆನಪೇ ಕಾರಾಗಿ
ಮನದ ದಾರಿಯಲ್ಲಿ ಓಡುತಿದೆ.
ಕಂದನಾಡಿದ ಆ ಪುಟ್ಟ ಗೂಡು
ಅವಳಿಗಾಗಿ ನಾವು ಪಟ್ಟ ಪಾಡು
ನಾವು ಕೂಡಿ ಹಾಡಿದ ಹಾಡು
ನೆನಪು ಬರುತಿವೆ.
ಹೆಜ್ಜೆಗೊಂದು ಕಲಿತ ಪಾಠ
ಬದುಕು ನಮ್ಮ ಜೊತೆಯಾಡಿದ ಆಟ
ತುತ್ತು ಹಂಚಿಕೊಂಡು ಮಾಡಿದ ಊಟ
ನೆನಪು ಬರುತಿವೆ.
ನಗುತ ಇರುವ ಈ ಪುಟ್ಟ ಹೂವು
ಜೊತೆಯಲಿ ಸವಿದ ಬೆಲ್ಲ-ಬೇವು
ಇವಳು ನುಂಗಿದ ನೂರು ನೋವು
ನೆನಪು ಬರುತಿವೆ.