My Poems
Tuesday, September 19, 2017
ಬದಲಾವಣೆ
ಅವರೆಂದರು, ನೀ ದೊಡ್ಡವನಾದ ಮೇಲೆ ಬಹಳ ಬದಲಾಗಿದ್ದೀಯೆ!
ನಾನಂದೆ, ಇಲ್ಲ, ಬದಲಾಗಿದ್ದರಿಂದಲೇ ನಾನು ಈಗ ದೊಡ್ಡವನಾಗಿದ್ದೇನೆ!
Thursday, July 13, 2017
ಹೆಂಡತಿ
ಬಹುಶ: ನನ್ನ ಹೆಂಡತಿ ಶ್ರೀಕ್ರಿಷ್ಣನ ಕುಲದವಳೆ ಇರಬೇಕು!
ಆದಕ್ಕೇ..
ಬಾಯಿ ತೆಗೆದಾಗೆಲ್ಲ ಬ್ರಹ್ಮಾಂಡ ವನ್ನೇ ತೋರಿಸುತ್ತಾಳೆ.
Tuesday, October 18, 2016
ಜೊತೆ
ಬಂದೆ ನೀನು ಜೊತೆಯಾಗಿ
ಬಾಳ ದಾರಿಗೆ
ಹೆಗಲಿಗೆ-ಹೆಗಲು ಕೊಟ್ಟೆ
ಬದುಕ ಬಂಡಿಗೆ
ಕುಗ್ಗಲಿಲ್ಲ ಎಂದೂ ಹಾದಿಯ
ಕಲ್ಲು-ಮುಳ್ಳಿಗೆ
ಏರು-ಇಳಿವು ಪರವೆ ಇರದೆ
ನಿಂತೆ ನನ್ನ ಬೆನ್ನಿಗೆ
ಏನೇ ಬರಲಿ ಹೀಗೆ ಇರುವ
ಎಂದಿಗೂ ಜೊತೆ-ಜೊತೆಗೆ
ನಾನೆಂದಿಗೂ ಚಿರಋಣಿ
ಈ ನಿನ್ನ ಪ್ರೀತಿಗೆ
Tuesday, October 4, 2016
ಹುಟ್ಟು - Birth
ಹೆಪ್ಪುಗಟ್ಟಿದ್ದ ದುಗುಡವ
ಕರಗಿಸಿತು ಆ ಅಳುವು
ಆ ದಿನ ಹುಟ್ಟಿದ್ದು ಮೂರು ಜೀವಗಳು
ಅಮ್ಮ, ಅಪ್ಪ ಮತ್ತು ಆ ಮಗುವು
All the tension was relieved
with that sweet cry
a mother and a father were born
with the baby that day
Thursday, September 29, 2016
Pray-Prey
She pled for love in her every pray
But for his lust she was just an another prey.
ನಾಟಕ
ಈ ಬದುಕು ನಾಟಕ ರಂಗ
ನಿನ್ನ ಪಾತ್ರ ನೀ ಮರೆತರ ಹೆಂಗ
ಮಾತು-ಕುಣಿತ ಮಾಡಲೇಬೇಕು ಸೀನ್ ಬಂದ್ಹಂಗ
ಮಾಡ್ಲೇಬೇಕು ಎಲ್ಲಾ ಮಾಸ್ತರ್ ಹೇಳಿದಾಂಗ
ಕಾದಿರಿಸು ಎಲ್ಲಾ ಮುಖವಾಡಾ ಒಂದೂ ಬಿಡದಾಂಗ
ನಗೋದು-ಅಳೋದು ಹೆಂಗ ಬರುತ್ತೋ ಹಂಗ
ಮೆತ್ತು ಬಣ್ಣಾನ ಯಾರಿಗೂ ಒಳಮುಖ ಕಾಣದಾಂಗ
ಮಾಡು ನಾಟಕಾನ ಅವನಾ ಮೆಚ್ಚೋಹಂಗ
ಮೆಚ್ಚಿ ಕೈ ಮುಗಿಯೋ ಹಾಂಗ
Monday, September 5, 2016
Don't know
They kept ignoring him
Till he became rich
Now all of them adore him
Don’t know how did it switch
Older Posts
Home
Subscribe to:
Posts (Atom)