ಈ ಬದುಕು ನಾಟಕ ರಂಗ
ನಿನ್ನ ಪಾತ್ರ ನೀ ಮರೆತರ ಹೆಂಗ
ಮಾತು-ಕುಣಿತ ಮಾಡಲೇಬೇಕು ಸೀನ್ ಬಂದ್ಹಂಗ
ಮಾಡ್ಲೇಬೇಕು ಎಲ್ಲಾ ಮಾಸ್ತರ್ ಹೇಳಿದಾಂಗ
ಕಾದಿರಿಸು ಎಲ್ಲಾ ಮುಖವಾಡಾ ಒಂದೂ ಬಿಡದಾಂಗ
ನಗೋದು-ಅಳೋದು ಹೆಂಗ ಬರುತ್ತೋ ಹಂಗ
ಮೆತ್ತು ಬಣ್ಣಾನ ಯಾರಿಗೂ ಒಳಮುಖ ಕಾಣದಾಂಗ
ಮಾಡು ನಾಟಕಾನ ಅವನಾ ಮೆಚ್ಚೋಹಂಗ
ಮೆಚ್ಚಿ ಕೈ ಮುಗಿಯೋ ಹಾಂಗ
No comments:
Post a Comment