ಗಣಪನೆಂದರೆ ನನ್ನ ಮಗಳಿಗೆ ಅಚ್ಚು-ಮೆಚ್ಚು
ದೊಡ್ಡಹೊಟ್ಟೆಯೋ, ಅಗಲಕಿವಿಯೋ, ಉದ್ದಸೊಂಡಿಲೋ
ಗೊತ್ತಿಲ್ಲ ಏನು ಅದರ ಗುಟ್ಟು.
ಬಹುಶಃ ಅವನಿಗೂ ಅವಳನ್ನು ಕಂಡರೆ ಇಷ್ಟ, ಹಾಗಾಗಿಯೇ
ಕಂಡಾಗೆಲ್ಲ ’ಹಾಯ್’ ಹೇಳುತ್ತಾನೆ, ’ಅಭಯ ಹಸ್ತ’ ಬೀಸುತ್ತ.
Thursday, January 28, 2016
Tuesday, January 19, 2016
ಭರವಸೆ
ನಿನ್ನ ಮೊಗವ ಕೈಯಲ್ಲಿ ಹಿಡಿದು ಎಷ್ಟು ದಿನವಾಯ್ತಲ್ಲೇ ಕೂಸೆ
ಆ ತುಟಿಯ ಅದೇಷ್ಟು ಮುತ್ತಿದರು ತೀರುತ್ತಿರಲಿಲ್ಲ ಆಸೆ
ಆ ಉದ್ವೇಗದಲಿ ನಾ ಕೇಳಲೇ ಇಲ್ಲ ಕ್ಷಮಿಸು, ಚುಚ್ಚುತ್ತಿತ್ತೇ ಮೀಸೆ
ಅಗಲಲಾರೆ ಇನ್ನೆಂದೂ ಇರುವೆ ಜೊತೆಗೆ, ಇರಲಿ ಭರವಸೆ
ಆ ತುಟಿಯ ಅದೇಷ್ಟು ಮುತ್ತಿದರು ತೀರುತ್ತಿರಲಿಲ್ಲ ಆಸೆ
ಆ ಉದ್ವೇಗದಲಿ ನಾ ಕೇಳಲೇ ಇಲ್ಲ ಕ್ಷಮಿಸು, ಚುಚ್ಚುತ್ತಿತ್ತೇ ಮೀಸೆ
ಅಗಲಲಾರೆ ಇನ್ನೆಂದೂ ಇರುವೆ ಜೊತೆಗೆ, ಇರಲಿ ಭರವಸೆ
ಕೃಷ್ಣ
ಕಳ್ಳ ಎನ್ನಲೇ, ನಿನ್ನ ಸುಳ್ಳ ಎನ್ನಲೇ, ಕೃಷ್ಣಾ
ಎಲ್ಲರನು ಮರಳು ಮಾಡುವ ಮಳ್ಳ ಎನ್ನಲೇ
ಕೊಟ್ಟು ನೋಡುವೆ, ನೀ ಕಸಿದು ನೋಡುವೆ, ಕೃಷ್ಣಾ
ಕಷ್ಟದಲ್ಲಿ ಕರೆದಾಗ ಬಂದು ತಬ್ಬುವೆ, ನೀ ಬೆಳಕು ತೋರುವೆ
ಎಲ್ಲರನು ಮರಳು ಮಾಡುವ ಮಳ್ಳ ಎನ್ನಲೇ
ಕೊಟ್ಟು ನೋಡುವೆ, ನೀ ಕಸಿದು ನೋಡುವೆ, ಕೃಷ್ಣಾ
ಕಷ್ಟದಲ್ಲಿ ಕರೆದಾಗ ಬಂದು ತಬ್ಬುವೆ, ನೀ ಬೆಳಕು ತೋರುವೆ
Monday, January 18, 2016
ದೇವರು
ಊರ ಮುಂದಿನ ಆ ಕರಿಯ ಕಲ್ಲಿಗೆ
ಅದೇನು ಅಷ್ಟು ಶಕ್ತಿ ?
ತಲೆಯಲಿ ಕೊರೆಯುವ ತರ್ಕಗಳನು ಮೀರಿ ಹುಟ್ಟಿಸುವುದಲ್ಲ ಭಕ್ತಿ!
ಮೂರ್ತವೋ, ಅಮೂರ್ತವೋ
ವ್ಯಕ್ತಿಯೊ ಅಥವಾ ಅದೊಂದು ಅದಮ್ಯ ಶಕ್ತಿ
ಭಾವವೋ, ನಂಬಿಕೆಯೋ..
ದೇವರೆಂಬುದು ನಮ್ಮ-ನಮ್ಮ ಅಭಿವ್ಯಕ್ತಿ.
Subscribe to:
Posts (Atom)