Monday, January 18, 2016

ದೇವರು


ಊರ ಮುಂದಿನ ಆ ಕರಿಯ ಕಲ್ಲಿಗೆ
ಅದೇನು ಅಷ್ಟು ಶಕ್ತಿ ?
ತಲೆಯಲಿ ಕೊರೆಯುವ ತರ್ಕಗಳನು ಮೀರಿ ಹುಟ್ಟಿಸುವುದಲ್ಲ ಭಕ್ತಿ!
ಮೂರ್ತವೋ, ಅಮೂರ್ತವೋ
ವ್ಯಕ್ತಿಯೊ ಅಥವಾ ಅದೊಂದು ಅದಮ್ಯ ಶಕ್ತಿ
ಭಾವವೋ, ನಂಬಿಕೆಯೋ..
ದೇವರೆಂಬುದು ನಮ್ಮ-ನಮ್ಮ ಅಭಿವ್ಯಕ್ತಿ.

No comments:

Post a Comment